ಮುಖ ಪುಟ > ನನ್ನ ಕವನಗಳು (Poetry) > ಮೊದಲ ತೊದಲ ಕಾವ್ಯ …

ಮೊದಲ ತೊದಲ ಕಾವ್ಯ …


  
  ನೆಲ್ಮೆಯ ಓದುಗರಿಗೆ ಸುಸ್ವಾಗತ …
 
 

ಸಮುದ್ರ ತೀರದಲಿ ನನ್ನ ೧೮ ತಿಂಗಳ ಮಗಳೊಡನೆ ನಡೆಯುತ್ತಿದ್ದಾಗ ಬಂದ ಲಹರಿಯನ್ನು ಕಾವ್ಯ ರೂಪಕ್ಕೆ ಇಳಿಸಿದ್ದೇನೆ…
ಅಪ್ಪ ಮಗಳ ಸಂಭಂದ ದ ಬಗ್ಗೆ ಅನೇಕಾನೇಕ ರಚನೆಗಳು ಸಿಗುತ್ತವೆ. ಅವುಗಳ ಮಧ್ಯೆ ಈ ನನ್ನ ಕೆಲವು ಸಾಲುಗಳು … 
 
ಮುಸ್ಸಂಜೆಯಲಿ  ಸಾಗರ  ತೀರದಲಿ
ಚುಂಬಿಸುವ  ತಂಗಾಳಿಯಲಿ  ನಿನ್ನ  ಜೊತೆಯಲಿ ||
 
ನಿನ್ನ  ನಗುವಿಗೆ  ನಾ ಮನಸೋತೆ
ನನ್ನ  ದಿನಕೆ  ನಿ  ಆದೆ  ನನ್ನ  ಜೊತೆ
ಕೆಂಪಾದ  ರವಿಯು  ಸಮುದ್ರದ  ಜೊತೆ
ಕೆಂಪಾದ  ಈ  ಕೆನ್ನೆಯು  ಸದಾ  ನನ್ನ  ಜೊತೆ ||
 
ನಡೆಯುವೆ  ನಾನು  ನಿನ್ನಯ  ಜೊತೆಯಲಿ
ಇರುವೆನು  ನಾನು  ನಿನ್ನ  ಸುಖ  ದುಖ:ದಲಿ
ನೋವಾಗುವುದು  ಅಪ್ಪಳಿಸಿದರೆ  ಕಷ್ಟದ  ಅಲೆ
ಬಂದು  ನೀ  ಆಲಂಗಿಸಲು  ಸುಡು  ಬಿಸಿಲಲ್ಲೂ  ಹೂ  ಮಳೆ ||
 
ನಿನ್ನಯ  ತುಂಟಾಟದಲಿ  ಕಳೆಯುವೆ  ನಾ  ಕಾಲ
ನಿನ್ನ  ಚೆಷ್ಟೇಯನು  ಅನಂದಿಸುವೆ  ಸದಾ  ಕಾಲ
ಓ  ನನ್ನ  ಮುದ್ದಿನ  ಮಗಳೇ  ತಂದಿಹೆ  ಎನಗೆ  ಸವಿಗಾಲ
ಲಕ್ಷ್ಮೀ  ನಾರಾಯಣರ  ಕಣ್ಮಣಿಯಮ್ಮ  ನೀ  ಅನುಗಾಲ ||

 

 

 

 

~~~~~~~~~~~~~~~~~~~~~~~~~~~

 
Advertisements
  1. No comments yet.
  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: