ಮುಖ ಪುಟ > ದೈವ > ಅಗೋಚರ ಆ ಶಕ್ತಿ …

ಅಗೋಚರ ಆ ಶಕ್ತಿ …


ಇಂದು ಗುರು ಪೌರ್ಣಿಮೆ.
 
ಆಕಾಶದಿ ಹುಣ್ಣಿಮೆ ಚಂದಿರ ಪೂರ್ಣ ಪ್ರಕಾಶದಿ ಬೆಳಗಲು ಲೋಕಕ್ಕೆಲ್ಲ ಕ್ಷೀರಾಭಿಷೇಕವಾಗುತ್ತಿದೆ ಏನೋ  ಎಂದು ಅನಿಸುತ್ತದೆ.
ಗುರು ಪೂರ್ಣತೆಯ ಸಂಕೇತವೆಂದು ಗುರುವನ್ನು ಸ್ಮರಿಸುವ ದಿನವನ್ನು ಆಷಾಡ ದ ಪೂರ್ಣಿಮೆಯ ದಿನ ಆಚರಿಸುತ್ತಾರೇನೋ.
ಅದೇನೇ ಇರಲಿ, ಪ್ರತಿಯೊಬ್ಬರ ಜೀವನದಲ್ಲಿ ಗುರು ಪ್ರೇರಣೆ ಖಂಡಿತ ಇರುವುದು ಎನ್ನುವುದು ನನ್ನ ಭಾವನೆ. 
 
ತಾಯಿಯೇ ಮೊದಲ ಗುರು, ಆಚಾರ್ಯರು ದೇವರ ಸಮಾನ ಎಂದೆಲ್ಲ ಪುರಾಣ ಇತಿಹಾಸಗಳು ಸಾರಿ ಸಾರಿ ಗುರುವಿನ ಮಹತ್ವ ಹೇಳುತ್ತಿವೆ.
ನಮಗೆ ಸರಿ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶಿಸುವ ಯಾರೇ ಆಗಲಿ, ಅವರು ಪೂಜ್ಯ ಗುರುಗಳಿಗೆ ಸಮಾನರು ಎಂಬುದು ನನ್ನ ಅಭಿಮತ.
ಮಂತ್ರಾಲಯ ದಲ್ಲಿ ಗುರು ದರ್ಶನ ಮುಗಿಸಿ ನಿರ್ಮಲವಾಗಿ ಹರಿಯುವ ತುಂಗಭದ್ರೆಯ ದಡದಲ್ಲಿ ಕೂತು ವಿಸ್ಮಿತನಾದಾಗ ಬಂದ ಗುರು ಪ್ರೇರಣಾ ಗೀತ …
 
—————————————————-
ಅಗೋಚರ ಆ ಶಕ್ತಿಗೆ ನಮಿಸುವೆ ಈ ಕ್ಷಣವು
ಎಲ್ಲವ ನಡೆಸುವ ಶಕ್ತಿಗೆ ಅರ್ಪಿಸುವೆ ತನು ಮನವು
 
ಎಲ್ಲೋ ಹುಟ್ಟಿ ಎಲ್ಲೋ ಬೆಳೆವ ನಮ್ಮಯ ಪೋಷಣೆ 
ಎಲ್ಲೋ ಬೆಳೆದೆ ಮತ್ತೆಲ್ಲೋ ಸೇರುವ ನಮ್ಮಯ ಪಾಲನೆ
ನೋಡಿಕೊಳುವ ನೀನೆಲ್ಲಿ ಇರುವೆ, ಹೇಳು ನನ್ನ ದೊರೆಯೇ 
ನನ್ನಲ್ಲಿ ಇರುವೆಯ ಎಂಬ ಪ್ರಶ್ನೆಗೆ ಉತ್ತರಿಸು ಗುರುವೇ 
 
ಅನುದಿನದ ಕಾರ್ಯವನು ನುಡಿ ತಪ್ಪದಂತೆ ನಡೆಸುವೆ 
ಎಲ್ಲರೊಡನೆ ಒಂದಾಗುವಂತೆ ನೀ ಮಾಡುವೆ 
ಓ ಅಮರ ಚೇತನವೇ ತೋರಿ ಬಾ ನನ್ನೊಳಗೆ 
ನಿನ್ನೀ ಪ್ರಕಾಶದಿಂ ಬೆಳಗು ಬಾ ನನ್ನ ಜಗಕೆ 
 
ಏನೇನೋ ಆಸೆ, ಕಷ್ಟ, ಸುಖವ ನೀಡುವೆ ನೀನು 
ಎಲ್ಲವನು ಪರಿಹರಿಸಿ ಮುಗುಳ್ನಗುವೆ ನೀನು 
ಆದರು ಏಕಿಷ್ಟು ಕಠೋರವೆನಿಸುವುದೀ ಬದುಕು
ನಿನ್ನ ಪ್ರೇಮವನರಿಯದಿದ್ದೊಡೆ ಜೇವನದಿ ಬರಿ ಬಿರುಕು  
 
 
Categories: ದೈವ ಟ್ಯಾಗ್ ಗಳು:, ,
  1. ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
  1. No trackbacks yet.

ನಿಮಗೇನು ಅನಿಸಿತು ... Please Leave a Reply