ಮಳೆಯ ಮುತ್ತು ಬಿದ್ದಿತು …


ಮಳೆ ಇಳೆಯ ಮೇಲೆ ಮಾಡುವ ಮೋಡಿ ಈ ಕವನದ ವಸ್ತು.
ಮಳೆ ಬೀಳುವ ಸಮಯವನ್ನು ಭುವಿಯ ಸ್ನಾನದ ಸಮಯಕ್ಕೆ ಹೋಲಿಸಿ ಭೂಮಿಯ ಅನುಭವವನ್ನು ವರ್ಣಿಸಲು ಪ್ರಯತ್ನಿಸಿದ್ದೀನಿ.

Maleya Muttu, Pearly Rain drops

ಭಾವಾರ್ಥ ವಿವರಣೆ:

ಭುವಿಯ ಮೇಲೆ ಮಳೆ ಬೀಳುವುದು ಭುವಿಯ ಜಳಕದ ಸಮಯವೆಂದು ಬಾವಿಸಿ ಪದ್ಯ ಬರೆದಿರುವುದು.
ಹೀಗಾಗಿ ಜಳಕ ಕನ್ಯೆ ಭೂಮಿ.
ಸ್ನಾನ ಮರೆಯಲ್ಲಿ ಮಾಡುವ ವಿಧಾನವಾದ್ದರಿಂದ, ಮಳೆ ಬರುವ ಮೊದಲು ಕವಿಯುವ ಮೋಡವನ್ನು ಪರದೆ ಗೆ ಹೋಲಿಸಿದ್ದೇನೆ.
ಮುಗಿಲು ಇಲ್ಲಿ ಪುರುಷ ಸೂಚಕ. ಅವನಿಂದ ಮರೆಯಾಗಿ ಮಳೆಯಲ್ಲಿ ಸ್ನಾನ ಮಾಡಿ ನಂತರ ಮೋಡ ಮರೆಯಾಗುವುದು ಪರದೆ ತೆರೆಯುವಿಕೆಗೆ ಹೊಲಿಕೆ.
ಸ್ತ್ರೀಯ ಸಹಜ ಗುಣವಾದ ಲಜ್ಜೆ + ಪರದೆ ತೆರೆದಾಗ ಆಗುವ ನಾಚಿಕೆ “ನಾಚಿ ನೀರಾದಳು” ಎನ್ನುವ ಪ್ರಯೋಗಕ್ಕೆ ಉಪಯುಕ್ತ ಅನಿಸಿತು.

ಪಲ್ಲವಿಯಲ್ಲಿ ಬರುವ “ಇಳೆಯ ಜಳಕ ಶುರುವಾಯಿತು” ಅನ್ನುವುದು, ಯಾರು ಸ್ನಾನ ಮಾಡುತ್ತಿದ್ದಾರೆ ಅಂತ ತಿಳಿಯುತ್ತದೆ ಅಲ್ಲವೇ ?

“ಮೊದಲಿಗೆ ಬೀಳುವ ತುಂತುರ ಹನಿ ಎಲೆಯ ಮೇಲೆ ಮುತ್ತಂತೆ ಕಾಣುವುದರಿಂದ” ಮೊದಲನೇ ಚರಣದಲ್ಲಿ “ಎಲೆ ಎಲೆಗೂ ಮುತ್ತ ತೊಡಿಸಿದಳು” ಎನ್ನುವ ಪ್ರಯೋಗ.

ಬೀಳುವ ಮಳೆ ಪರ್ವತ ದಲ್ಲಿ ಹರಿದಾಗ ಮಣ್ಣಿನೊಂದಿಗೆ ಬೆರೆತು ಗಂಧದಂತೆ ಕಾಣುವುದು ವೈಶಿಷ್ಟ್ಯ.

ಹಾಗೆ ರಭಸವಾಗಿ ಹರಿಯುವ ನೀರು ಎಲ್ಲವನ್ನು ಶುಚಿ ಮಾಡುವಂತೆ ಭೂಮಿಯನ್ನು ಶುಚಿ ಮಾಡುತ್ತದೆ ಎಂಬ ಅರ್ಥದಲ್ಲಿ ಅದರ ಉಪಯೋಗ ಎರಡನೇ ಚರಣದಲ್ಲಿ.

ಮೂರನೇ ಚರಣದಲ್ಲಿ ಮಳೆಯ ನಂತರ ಬೀಸುವ ಗಾಳಿ ತೇವವನ್ನು ಒಣಗಿಸುವಂತೆ ಮತ್ತು  ಹಸಿರ ಪೈರು ಸೀರೆಗೆ ಹೋಲಿಕೆಯಾಗುವಂತೆ ಬಿಂಬಿಸಿದ್ದೇನೆ.

 

Advertisements
 1. ನಾಣಿ
  ಮಾರ್ಚ್ 4, 2013 ರಲ್ಲಿ 8:09 ಅಪರಾಹ್ನ

  ಬದರಿ ಅವರೇ, ಸುರಿವ ಮಳೆಯ ಸುಂದರ ಕವಿತೆ ಮಳೆ ಕಾಲಕ್ಕೆ ಸರಿಯಾದ ಕಲ್ಪನೆ, ಚೆನ್ನಾಗಿದೆ ಇಮ್ಮೆ ಹಾಡಿ ಪ್ರಯತ್ನ ಮಾಡಿ ನೋಡಿದೆ, ಸಂಗೀತ ಬಲ್ಲವರ ಬಳಿ ಕೇಳಿನೋಡೋಣ ತಮಗೆ ಅಭ್ಯಂತರ ವಿಲ್ಲದಿದ್ದರೆ.

  • ಮಾರ್ಚ್ 4, 2013 ರಲ್ಲಿ 9:53 ಅಪರಾಹ್ನ

   ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಅನೇಕ ವಂದನೆಗಳು ನಾರಾಯಣ್.
   ಅಗತ್ಯವಾಗಿ ಸರ್, ನನ್ನ ಭಾವಾರ್ಥಕ್ಕೆ ಸಂಗೀತದ ಇಂಪು ದೊರೆತರೆ ಅದು ನನ್ನ ಭಾಗ್ಯ …

 2. ಆಗಷ್ಟ್ 13, 2013 ರಲ್ಲಿ 1:25 ಅಪರಾಹ್ನ

  ಒಳ್ಳೆಯ ಕವನ ಮತ್ತು ಮನ ಮುಟ್ಟುವ ಭಾವಾರ್ಥ.

  • ಆಗಷ್ಟ್ 13, 2013 ರಲ್ಲಿ 1:41 ಅಪರಾಹ್ನ

   ಬದರಿ ಸರ್, ನಿಮ್ಮ ಸರ್ಟಿಫಿಕೇಟ್ ನಿಂದ ಸುರಿ ಮಳೆಯ ಸಂತಸ ತಂದಿದೆ. ಧನ್ಯವಾದಗಳು.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: