ಮುಖ ಪುಟ > ಜೀವನ, ನನ್ನ ಕವನಗಳು (Poetry), ಹೀಗೆ ಸುಮ್ಮನೆ, kannada, kavana, kavanagalu, kavya, padya > ಕಥೆಯೊಂದ ಓದಿದೆ ಅತೃಪ್ತ ಮನದಲಿ …

ಕಥೆಯೊಂದ ಓದಿದೆ ಅತೃಪ್ತ ಮನದಲಿ …


Katheyonda odide atrupta manadali

ಭಾವಾರ್ಥ

ಹುಳಿ ದ್ರಾಕ್ಷಿ ಮತ್ತು ನರಿಯ ಕಥೆ – “ಎಟುಕದ ದ್ರಾಕ್ಷಿಯನ್ನು ನರಿ ಹೇಗೆ ಅದು ಹುಳಿ ಎಂದು ತಿಳಿದು ಪಡೆಯುವ ಪ್ರಯತ್ನವನ್ನು ಬಿಟ್ಟಿತು” ಬಹಳಷ್ಟು ಜನರಿಗೆ ತಿಳಿದಿದೆ.

ಅದರ ಹಿನ್ನಲೆಯಲ್ಲಿ ಬರೆದ ರಚನೆ ಇದು. ತಿಳಿಯಾದ ಮನವಿರದೆ ನಾವು ತೃಪ್ತಿ ಹೊಂದುವುದಿಲ್ಲ ಎನ್ನುವುದು ತಾತ್ಪರ್ಯ.

ಮೊದಲ ಚರಣದಲ್ಲಿ ಮೊಸರ ಮಾಡುವ ದೃಷ್ಟಾಂತ. ಸರಿಯಾಗಿ ಮೊಸರು ಮಾಡಲು ಹೇಗೆ ಕಾದು ಆರಿದ ಹಾಲಿಗೆ ತಕ್ಕಷ್ಟು ಹೆಪ್ಪು, ತೀರ ಉಷ್ಣವು ಅಲ್ಲದ ತೀರ ಶೀತವು ಇರದ ವಾತಾವರಣದ ಅವಶ್ಯಕತೆ ಇದೆಯೋ ಹಾಗೆ ನಮಗೆ ಜೀವನದಲ್ಲಿ ಸಿಗುವ ಸರಿಯಾದ “ಮಾರ್ಗದರ್ಶನ ಮತ್ತು ಪರಿಸರ” ಎಂತಹ ವ್ಯಕ್ತಿಯಾಗಿ ರೂಪಗೊಳ್ಳಬಹುದು ಎನ್ನುವುದಕ್ಕೆ ಸೂಚನೆ. ಯಾವುದೇ ಹೆಚ್ಚು ಕಮ್ಮಿ ಆದರೆ ಒಡಕು ಮೊಸರೆ ಗತಿ …

ಎರಡನೇ ಚರಣದಲ್ಲಿ ಕುದಿಯುವ ಪಾಯಸವನ್ನು ಕುಡಿದು ನಾಲಗೆ ಸುಟ್ಟುಕೊಳ್ಳಬಹುದೇ ವಿನಃ ಸವಿಯನ್ನು ಆನಂದಿಸಲಾಗುವುದಿಲ್ಲ.
ಹಾಗೆ, ಯಾವುದೇ ಗೊಂದಲದಲ್ಲಿ ಸಿಲುಕಿದಾಗ ಅಥವಾ ವಿಶ್ಲೇಷಣೆ ಮಾಡಬೇಕಾದರೆ ಶಾಂತತೆ ಮುಖ್ಯ. ಅದನ್ನು ಹರಿವಾಣದಲ್ಲಿ ಹದವಾಗಿ ಹರಡಿ ಎನ್ನುವುದಕ್ಕೆ ಹೋಲಿಕೆ ಮಾಡಿದ್ದೀನಿ.

ಹೀಗೆ ಸಹನೆ ಮತ್ತು ತಾಳ್ಮೆ ಬದುಕಿನ ಹಾಸು ಹೊಕ್ಕಾದಾಗ, ಯಾವುದೇ ಸಿಗಲಾರದ ಹಣ್ಣು ಸುಮ್ಮನೆ ಹುಳಿಯೆಂದು ಜರಿಯದೆ ಜೀವನ ಸಂತೃಪ್ತಿ ಪಡೆಯಬಹುದು ಎನ್ನುವುದು  ಪದ್ಯದ ಸಾರಾಂಶ.

Advertisements
 1. ಬದರಿನಾಥ ಪಳವಳ್ಳಿಯ ಕವನಗಳು
  ಏಪ್ರಿಲ್ 17, 2013 ರಲ್ಲಿ 6:28 ಅಪರಾಹ್ನ

  ಮೊದಲ ನೋಟಕೆ ಹುಳಿಯಾದರೂ, ಕಹಿಯೇ ಆರೋಗ್ಯಕೆ ಸದಾ ಒಳಿತು.
  http://www.badari-poems.blogspot.com

 2. ಆಗಷ್ಟ್ 13, 2013 ರಲ್ಲಿ 1:26 ಅಪರಾಹ್ನ

  ಬದುಕಿನಲ್ಲಿ ಸಿಗಲಾರದಕ್ಕೆ ಹಂಬಲಿಸಿ ಇರುವುದನ್ನು ದೂರ ಮಾಡಿಕೊಳ್ಳುವ ಪೆದ್ದರು ನಾವು.

  • ಆಗಷ್ಟ್ 13, 2013 ರಲ್ಲಿ 1:45 ಅಪರಾಹ್ನ

   ನಿಜ ಸರ್, “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ … ” ಎಂಬ ಅಡಿಗರ ಮಾತಿನಂತೆ

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: