ನಂಬಿಕೆ …


nambike, daiva

 

ಭಾವಾರ್ಥ

ಕಾಣದ ದೈವಕ್ಕೆ ನಮಗೆ ಒಳಿತು ಮಾಡು ಎಂದು ಬೇಡುವುದು ಸಹಜ.
ಕೆಲವೊಮ್ಮೆ ಅದು ಅತಿರೇಕಕ್ಕೂ ಹೋಗಬಹುದು. ತಂದೆ ತಾಯಿ ಹೇಳಿದರೆಂದು ಒಂದು ಪೂಜೆ, ನೆಚ್ಚಿನ ಸ್ನೇಹಿತರು ಅರುಹಿದರೆಂದು ಮತ್ತೊಂದು ನೇಮ ನಿಯಮ, ಇನ್ಯಾರೋ ಹಿತೈಷಿ ಹೇಳಿದರೆಂದು ಅವರ ನೆಚ್ಚಿನ ಜ್ಯೋತಿಷಿಗೆ ಮುಗಿಬಿದ್ದು ಬೇಗ ಕಷ್ಟ ಪರಿಹರಿಸಿ ಎನ್ನುವ ಅರಿಕೆ. ಇದರಲ್ಲಿ ತಪ್ಪು ಸರಿ ಎನ್ನುವ ವಾದವಿಲ್ಲ. ಅವರವರಿಗೆ ತೋಚಿದ ಹಾಗೆ ಮಾಡುವ ಸ್ವಾತಂತ್ರ್ಯ ಎಲ್ಲರಲ್ಲೂ ಇದೆ.  ಆದರೆ ಮನುಜ ಪ್ರಯತ್ನವಿರದೆ “ಕಾಯಕ” ದಿಂದ ವಿಮುಖರಾಗಬಾರದೆಂಬುದೇ ಈ ಕೃತಿಯ ಬಿನ್ನಹ ಶುರುವಿನಲ್ಲಿ .

“ಮನಸಿಗೆ ತೃಪ್ತಿ ತಂದುಕೊಳ್ಳದೆ, ಏನೋ ಕಳೆದು ಕೊಂಡವರ ಹಾಗೆ ಸದಾ ಕೊರಗುತ್ತ ಇದ್ದರೆ ಅಥವಾ ಬಹುತೇಕ ವೇಳೆ ಕಣ್ಣು ಮುಚ್ಚಿ ಕೇವಲ ಜಪ ತಪ, ಉಪವಾಸ, ಪೂಜೆ ಮಾಡುತ್ತಾ ಇದ್ದರೆ, ತೇಜೋಮಯವಾದ ದಿನದ ಬೆಳಕನ್ನೇ ನೋಡದೆ ಬರಿ ಭಯ ಹುಟ್ಟಿಸುವ ರಾತ್ರಿ ನೋಡಬೇಕಾಗುತ್ತದೆ ಎನ್ನುವುದು ಎರಡನೇ ಚರಣದ ಸಾರಾಂಶ.

ಸಲಹೆಗಳಿಗೇನು ಬರವಿಲ್ಲವಲ್ಲ ! ನಮಗೆ ಇಂತಹ ಕಷ್ಟ ಎಂದರೆ ಸಾಕು, ” ಹೀಗೆ ಮಾಡಿ, ಹಾಗೆ ಮಾಡಿ, ನಿಮಗೆ ಯಾರೋ ಮಂತ್ರ ಮಾಡಿಸಿದ್ದಾರೆ, ಇತ್ಯಾದಿ ಇತ್ಯಾದಿ … ಹೀಗೆ ಎಲ್ಲ ಬಲ್ಲವರಂತೆ ಮಾತನಾಡುವವರೇ ಜಾಸ್ತಿ”. ಅದು “ಎತ್ತು ಏರಿಗೆ… ಕೋಣ ನೀರಿಗೆ” ಎನ್ನುವಂತೆ ದಾರಿ ತಪ್ಪಿಸುವುದೇ ಜಾಸ್ತಿ ಎನ್ನುವ ಒತ್ತು ಮೂರನೇ ಚರಣದಲ್ಲಿ.

ಅಂಧ ಶ್ರದ್ಧೆ ಬಿಟ್ಟು ನಿಜವಾಗಿ ತಾನು ಮಾಡುವ ಕಾರ್ಯದ ಮೇಲೆ ನಂಬಿಕೆ ಇಟ್ಟಾಗ ಮತ್ತು ತಿಳಿದವರು ಹೇಳಿದಾಗ ನಮ್ರತಯಿಂದ ವಿಮರ್ಶೆ, ಪ್ರಶ್ನೋತ್ತರ ಮಾಡಿ ತಪ್ಪಿದ್ದರೆ ತಿದ್ದುಕೊಂಡು, “ಅಂತರಂಗದಲ್ಲಿ ಹರಿಯನ್ನು ನೆನೆ” ಎನ್ನುವಂತೆ ನಮ್ಮೊಳಗಿರುವ ದಿವ್ಯವಾದ ದೈವ ಶಕ್ತಿಯನ್ನು ಹುಡುಕಿದರೆ ಗೋಚರವಾಗುವುದಿಲ್ಲವೇ ಆ ಪ್ರೇಮ ಮೂರುತಿ ಎನ್ನುವ ಪ್ರಶ್ನೆಯೊಂದಿಗೆ ನಾಲ್ಕನೇ ಚರಣ ಮುಗಿಯುತ್ತದೆ …

Advertisements
  1. No comments yet.
  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: