Home > ದೈವ, ನನ್ನ ಕವನಗಳು (Poetry), ಪ್ರಕೃತಿ, kannada, kavana, kavanagalu, kavya, padya > ಯಾಕಯ್ಯ ಮುನಿದಳು ನಿನ್ನ ಸತಿ ಕೇದಾರ !

ಯಾಕಯ್ಯ ಮುನಿದಳು ನಿನ್ನ ಸತಿ ಕೇದಾರ !


ತಿಂಗಳ ಕೆಳಗೆ (ಜೂನ್ ೨೦೧೩) ಪವಿತ್ರ ಯಾತ್ರಾಧಾಮವಾದ ಶ್ರೀ ಕೇದಾರನಾಥದಲ್ಲಿ ಪ್ರಕೃತಿ ಮುನಿದು, ಪ್ರವಾಹ ಉಕ್ಕಿ ಹರಿದು, ಕೇದಾರನನ್ನೇ ಆಪೋಶನ ತೆಗೆದುಕೊಂಡಿತು.

ಈ ಹಿನ್ನಲೆಯಲ್ಲಿ ಕೇದಾರನಲ್ಲಿ ಇಟ್ಟ ಪ್ರಶ್ನೆಗೆ ಆ ಪರಮಾತ್ಮ ಉತ್ತರಿಸುವ ಗೀತೆಯಂತೆ ರಚಿಸುವ ಒಂದು ಪ್ರಯತ್ನ …

ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತೀರಲ್ಲವೇ?

ಬ್ಲಾಗ್ ನಲ್ಲಿ ಕಾಮೆಂಟ್ ಮಾಡಿ ಅಥವಾ badarithyamagondlu@gmail.com ಗೆ ಇ-ಅಂಚೆ ಕಳಿಸಿ.

Kedar Floods

Advertisements
 1. ನಾಣಿ
  July 23, 2013 at 8:59 PM

  ಬದರಿ, ಕೇದಾರನ ಸತಿಯ ಬಗ್ಗೆ ಬರೆದಿರುವ ಕವಿತೆ ಏನೆಂದು ಹೇಳುವುದು, ಮನುಜ ದುಃಖವನ್ನು ಮರೆಯಲು ಬಯಸುವುದು ಸಹಜ, ದುಃಖದನಾಹುತ ಚಿತ್ರಸಮೇತ ಬರೆದಿದ್ದೀರಿ,ಆ ಸುದ್ದಿ ಮತ್ತೆಕೇಳಿದಷ್ಟೇ ನೆನಪಾಯ್ತು.ಅಂಬಿಕಾತನಯನತ್ತೆ ಇಳಿದು ಬಾ ತಾಯಿ…. ಆದ್ರೆ ದುಡುಕಿ ಬಾರದಿರು…. ನಿನ್ನ ಮಡಿಲಲ್ಲಿ ಮಕ್ಕಳು ಮುಳುಗೇಳುತಿಹರು…..ಎಣಿಕೆ ಇಲ್ಲದಷ್ಟು ಸಾವು, ಮರಳಿಬಾರದವರ ಮನೆಯವರ ನೋವು …..ಈ ವರ್ಷ ವರ್ಷಧಾರೆ ಪ್ರಪಂಚದೆಲ್ಲೆಡೆ ಇದೇ ರೀತಿ ಸಾಗಿದೆ.ನಮ್ಮವರ ಮುನ್ನೆಚ್ಚರಿಕೆ ಏನೂ ಇಲ್ಲ ಬಿಡಿ. ಎಲ್ಲದಕ್ಕೂ ದೇವರ ಮೇಲೆ ಭಾರಹಾಕಿದರೆ ಆದೀತೆ?

  • July 24, 2013 at 1:08 PM

   ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ನಾರಾಯಣ್.
   “ತಾನು ಬಾಳಿ ಇತರರಿಗೂ ಬಾಳಲು ಬಿಡಬೇಕು”. ಇಂತಹ ಮನೋಧರ್ಮವೇ ಕಡಿಮೆ ಆಗುತ್ತಿದೆ. ಪ್ರಕೃತಿ/ಸೃಷ್ಟಿಯ ಅರಿವಿಲ್ಲದೆ ಸುಮ್ಮನೆ ಬೇಕಾಬಿಟ್ಟಿ ಬೆಳೆದರೆ ಅದು ಅಭಿವೃದ್ಧಿ ಅಲ್ಲ. ಅಧೋಗತಿಗೆ ಪಥವಷ್ಟೇ.

 2. Nalinavenkatanag
  July 23, 2013 at 9:47 PM

  “ಕ್ಷಮಯ ಧರಿತ್ರಿ” ಯದರೋ ಎಷ್ಟು ದಿನ ತಡೆದಳು.
  ಒಂದೊಂದು ಸಾಲುಗಳು ಶಿವನೆ ನಿಮ್ಮ ಹತ್ತಿರ ಹೇಳಿಸಿದ ಹಾಗಿದೆ.

  Sent from my iPhone

  • July 24, 2013 at 1:12 PM

   ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ನಳಿನಾ ವೆಂಕಟನಾಗ್,
   ಶಿವನೇ ಹೇಳಿಸಿದನು ಎಂದು ನನ್ನನ್ನು ದೇವದೂತನಾಗಿ ಮಾಡಿಬಿಟ್ಟಿರಿ 🙂
   ಪ್ರಕೃತಿಯು ಕ್ಷಮಾಗುಣವನ್ನು ಸ್ತ್ರೀಯರಲ್ಲಿ ಸಹಜವಾಗಿ ಬೆಳೆಸಿದೆ. ಸಾಮಾನ್ಯವಾಗಿ ಪೋಷಿಸುವರು ಅವರೆ ಅಲ್ಲವೇ!

 3. July 23, 2013 at 11:59 PM

  ಪೂಜಾ ಸ್ಥಳಗಳೆಲ್ಲಾ ವ್ಯಾಪಾರ ಕೇಂದ್ರಗಳಾಗಿ, ಮನೋಹರವಾದ ಪ್ರಕೃತಿಯ ಮಡಿಲೆಲ್ಲಾ ಮನುಷ್ಯನ ಮೋಜಿನ ತಾಣವಾಗಿ,
  ಕಂಡ ಕಂಡಲ್ಲೆಲ್ಲಾ ತನ್ನ ನೀಚ ಬುದ್ದಿಯ ತೋರಿ, ಇರುವುದನ್ನು ತೃಪ್ತನಾಗಿ ಅನುಭವಿಸದೆ, ಕಂಡದ್ದನ್ನೆಲ್ಲಾ ಬಾಚಿ ಕೊಳ್ಳುವ ಹುಲು ಮನುಜನಿಗೆ ಪಾಠ ಕಲಿಸಲು, ಪ್ರಕೃತಿಗಲ್ಲದೆ ಇನ್ನಾರಿಗೆ ಸಾಧ್ಯ. ರುದ್ರ ಮನೋಹರವಾಗಿದ್ದ ತಾಣವನ್ನು ರುದ್ರ ಭೀಕರವನ್ನಾಗಿಸಿ ಎಚ್ಚರಿಸಿದಂತಿದೆ ಪ್ರಕೃತಿ ಮಾತೆ.
  ನಾವುಗಳು ನೋಡಿ ಆನಂದಿಸ ಬೇಕಾದುದನ್ನು ನಮಗೇ ಬೇಕೆಂದು ಹೇಳಿದರೆ ನಾವೇ ಉಳಿಯಲಾರೆವು.
  ನೀವು ಹೇಳಿರುವುದು ಸತ್ಯವಾದ, ನೋವು ತುಂಬಿದ ಮಾತುಗಳು.

  • July 24, 2013 at 1:15 PM

   ನಿಮ್ಮ ವಿಮರ್ಶೆಗೆ ನನ್ನ ನಮನಗಳು ನಾಗಶೈಲ ಕುಮಾರ್.
   ತೃಪ್ತಿ ಅನ್ನುವುದು ಮನುಜ ಮೊದಲು ಕಂಡುಕೊಳ್ಳಬೇಕಾದ ಸತ್ಯ.
   ಇರುವುದ ಗೊಣಗದೆ ಅನುಭವಿಸಿದರೆ ಮತ್ತಷ್ಟು ಕೊಡುತ್ತದೆ ಸೃಷ್ಟಿ. ಇಲ್ಲ ಅಗತ್ಯಕ್ಕಿಂತ ಜಾಸ್ತಿ ಬೇಕು ಅಂದರೆ ನಮ್ಮನ್ನು ಶಿಕ್ಷಿಸಲು ಗೊತ್ತು ನಮಗರಿವಿಲ್ಲದ ಪ್ರಕೃತಿಗೆ.

 4. July 28, 2013 at 1:30 AM

  ಮೇಘ ಸ್ಫೋಟ ದ ತೀವ್ರತೆ ಎದುರು ಯಾವ ಕಲ್ಪಿತ ತಾಂಡವ ನ್ರಿತ್ಯವು ನಡೆಯಲಿಲ್ಲ . ಕಾಲನ ಹಾದಿಯಲ್ಲಿ ಕಟ್ಟಡ , ಸಮಾಧಿ ಕಟ್ಟಿದವರು , ಪ್ರಕೃತಿಗೆ ಸವಾಲು ಹಾಕುವ ಮೂರ್ಖತೆಗೆ ಸಾಕ್ಷಿಯಾದರು. ಧಾರ್ಮಿಕ ನಂಬಿಕೆಗಳೂ ಕೂಡ ಪ್ರಾಕೃತಿಕ ಕಟ್ಟು ಕಟ್ಟಳೆ ಗೆ ಹೊರತ್ಗಿರಲು ಸಾಧ್ಯವಿಲ್ಲ ಎನ್ನುವುದು ಸಾಬೀತಾದರೂ , ಮೂಢ ನಂಬಿಕೆಗೆ ಜೋತು ಬಿದ್ದವರು ಇನ್ನಾದರೂ ಬದಲಾಗಬೇಕು G S S ಬರೆದ ಯಾವುದೀ ಪ್ರವಾಹವೋ ಕವನ ಇವರ ಕಣ್ಣು ತೆರೆಸಿದರೆ ಬದುಕು ಸಾರ್ಥಕ

  • July 29, 2013 at 1:05 AM

   ನಮಸ್ತೆ,
   ನಿಮ್ಮ ವಿಮರ್ಶೆ ನನ್ನ ಚಿಂತನೆಗೆ ಹತ್ತಿರವಿರುವುದು.
   ನಿಮ್ಮ ಅನಿಸಿಕೆ ಓದುವುದರಲ್ಲಿ ನನ್ನ ದನ್ಯತೆ ಇದೆ. ಪುಟಕ್ಕೆ ಬಂದು, ಓದಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು…

   ನಿಮ್ಮ ವಿಶ್ವಾಸಿ,
   ಬದರಿ

 5. Ravikiran
  August 7, 2013 at 1:34 AM

  Dear Badari,
  Nimma kavanagalanu hoodi thumba santoshavaitu. kshamisi nana anisikeyanu kannadadalli bareyalu sadyavagallila. Nalku varusha joteyali eedaroo nimma partibeyanu gamanisalilla. Nimma partibeenda kannadavanu oolise matu belesi.

  Nima vishvasi,
  Ravikiran S B
  SIT classmate

  • August 7, 2013 at 2:02 PM

   ನಮಸ್ತೆ ರವಿ,

   ಬಹಳ ಸಂತೋಷ ಆಯಿತು ನಿಮ್ಮ ಮೆಚ್ಚುಗೆ ಓದಿ. ಮತ್ತು ಕಾಲೇಜು ದಿನದ ಸ್ಮರಣೆ ಕೂಡ ಆಯ್ತು. ಸುಮ್ನೆ ಒಂದಷ್ಟು ಬರೀತೀನಿ ಅಷ್ಟೇ ರವಿ. “ಪ್ರತಿಭೆ” ಬಹಳ ದೊಡ್ಡ ಪದ. ನಿಮ್ಮ ಅನಿಸಿಕೆಗೆ ಧನ್ಯವಾದಗಳು.

   ನಿಮ್ಮ ವಿಶ್ವಾಸಿ,
   ಬದರಿ

 6. August 8, 2013 at 1:22 PM

  ಪ್ರಕೃತಿಯೇ ದೇವರು, ಅದನ್ನು ಹಾಳುಗೆಡವಿದಾಗಲೆಲ್ಲ ಮನುಜನಿಗೆ ಪ್ರಕೃತಿ ಬುದ್ಧಿ ಹೇಳಿದೆ. ಗಂಗಾ ಮಾಯಿ ಮತ್ತಿತರ ನದಿಗಳ ರಭಸಕ್ಕೆ ಒತ್ತುವರಿಗಳೆಲ್ಲ ಉರುಳಿ ಬೀಳಿವಾಗ ನಮ್ಮ ನೆಲ ದಾಹ ಅರಿವಾಗುತ್ತದೆ.

  ಉತ್ತಮ ಬ್ಲಾಗಿಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ.
  http://badari-poems.blogspot.in/

  • August 8, 2013 at 2:52 PM

   ನಿಮ್ಮ ಆಗಮನಕ್ಕೆ ಸುಸ್ವಾಗತ ಶ್ರೀ ಬದರಿನಾಥ್ ಅವರೆ.
   ಸಾಲುಗಳ ಅರ್ಥವನ್ನು ಒಂದೆರಡು ಸಾಲಿನಲ್ಲಿ ಅರ್ಥಗರ್ಭಿತವಾಗಿ ಹೇಳಿದ್ದೀರಿ.
   ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

   ನಿಮ್ಮ ವಿಶ್ವಾಸಿ,
   ಬದರಿ

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: