ದಿವ್ಯತೆಯ ಅನುಭಾವ …


ಮಕ್ಕಳು ದೇವರಿಗೆ ಸಮಾನ ಎನ್ನುವುದು ಒಂದು ಮಾತಾದರೂ, ಆ ಮಕ್ಕಳೊಡನೆ ಇದ್ದಾಗ ಆಗುವ ಅನುಭವ ಯಾವ ದೈವ ದರ್ಶನಕ್ಕೂ ಕಮ್ಮಿ ಏನಲ್ಲ ಎಂದು ಎಲ್ಲರೂ ಒಪ್ಪತಕ್ಕ ಮಾತೆ.

ಅಂತಹ ಒಂದು ಹಿನ್ನಲೆಯಲ್ಲಿ ಬರೆದ ಈ ಆಲೋಚನಾ ಗೀತೆ, ನನ್ನ ಮನದ ಅನುಭವವನ್ನು ಒಂದು ಸಾಕ್ಷಾತ್ಕಾರದ ಅನುಭಾವವೆಂಬಂತೆ ಪ್ರಸ್ತುತಪಡಿಸುವ ಒಂದು ಪ್ರಯತ್ನ.

ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವಿರೆಂದು ಭಾವಿಸಿದ್ದೀನಿ…

 

Divyate-Kaaturate

Advertisements
 1. August 30, 2013 at 3:59 PM

  ಬದರಿ,ಈ ಬಾರಿ ತಮ್ಮ ಕವಿತೆ ಪ್ರಕೃತಿಯನ್ನು ಒಳಗೊಂಡಿದ್ದರೂ ವಿಭಿನ್ನ ವಿಷಯಕ್ಕೆ ಕೈಚಾಚಿದೆ,ತಮ್ಮ ಕಲ್ಪನೆ,ದೈವತ್ವದ ಬಗೆಗಿನ ದಿವ್ಯತ್ವ,ಕಣ್-ಕರುಳರಿಯದ ಕಾರುಣ್ಯಭಾವ, ಭುವಿಯ ಸಹಜ ಗುಣಗಳ ಭವ್ಯ ವಿವರಣೆ ಓದಲು ಅದೇನೋ ಚೆನ್ನ.ಇದೇ ರೀತಿ ಬೇರೆ ಬೇರೆ ವಸ್ತುವನ್ನಿಟ್ಟುಕೊಂಡು ಬರೆದಲ್ಲಿ ಹೆಚ್ಚು ಓದಲಿಚ್ಚಿಸುತ್ತೇನೆ. ಸೊಗಸಾಗಿದೆ.

  • August 30, 2013 at 4:09 PM

   ಶ್ರೀ ನಾರಾಯಣ್, ನಿರಂತರ ಪ್ರತಿಕ್ರಿಯೆಗೆ ನನ್ನ ಧನ್ಯವಾದ. ನಿಮ್ಮ ಅನಿಸಿಕೆಗೆ ಸ್ವಾಗತ.
   ಒಂದ್ ಕಂಡೀಶನ್ ಹಾಕಬಿಟ್ರಲ್ಲ 🙂 ನಿಜ ವೈವಿಧ್ಯತೆ ಇರದಿದ್ದರೆ ಸೋಜಿಗ ಹುಟ್ಟುವುದಿಲ್ಲವೇನೋ. ಆದಷ್ಟು ವಿವಿಧ ಬಗೆ ಬರೆಯುವುದು ನನ್ನ ಹಂಬಲ. ಆದರೆ “ಭಾವನೆ ಅನ್ನುವುದು ಒಂದು ರೀತಿ ಸ್ವಯಂಬು” ಅಲ್ಲವೇ. ಹೀಗಾಗಿ ಬೇರೆ ಬೇರೆ ಭಾವನೆ ಬಂದಾಗ ಹೆಚ್ಚು ವೈವಿಧ್ಯತೆ ಬರುವುದು. ಆದರೆ ಈ ಭಾವನ ಲಹರಿ ನನ್ನ ಅಣತಿಯಲ್ಲಿ ಇಲ್ಲ 🙂

 2. Prasad
  August 30, 2013 at 6:00 PM

  ಅರ್ಥಪೂರ್ಣ ಕವಿತೆ. ಪ್ರತಿಯೊಬ್ಬನೂ ಒಂದು ತರಹ ಜೀವನದಲ್ಲಿ ಜಿಜ್ಞಾಸು. ನೀವು ಕೂಡ ಒಬ್ಬ ಜಿಜ್ಞಾಸು ಎಂದು ತೋರಿಸಿದ್ದೀರಿ ಈ ನಿಮ್ಮ ಸುಂದರ ಕವಿತೆಯಲ್ಲಿ.

  • August 30, 2013 at 6:19 PM

   ಧನ್ಯವಾದಗಳು ಕೃಷ್ಣ ಪ್ರಸಾದ್ ಸರ್. ನಿಮ್ಮ ಅನಿಸಿಕೆ ನೂರಕ್ಕೆ ನೂರು ಸತ್ಯ. ತಿಳಿಯುವ ಹಂಬಲ ಎಲ್ಲರಲ್ಲೂ ಇರುವುದು. ಆಗಷ್ಟೇ ತಿಲಿದುಕೂಳ್ಳುವುದಕೆ ಇಚ್ಛೆ ಬರುತ್ತದೆ. ನಿಮ್ಮ ಮೆಚ್ಚುಗೆಗೆ ನನ್ನ ಧನ್ಯತಾರ್ಪಣೆ …

 3. Anonymous
  August 30, 2013 at 10:06 PM

  good. you have the trappings of a poet. I would strongly advice a visit to ‘padyapaana’ web site if you wish to become the good old orthodox poet.

  • August 30, 2013 at 11:20 PM

   ನಿಮ್ಮ ಹುರಿದುಂಬಿಕೆಯ ಮಾತುಗಳಿಗೆ ನಾನು ಆಭಾರಿ. “ಪದ್ಯಪಾನ” ಚಂದೋಬದ್ಧ ಕವಿತೆ ರಚಿಸಲು/ಕಲಿಯಲು ಅತ್ಯುತ್ತಮ ತಾಣ. ಅದರ ಪರಿಮಿತಿಯಲ್ಲಿ ರಚಿಸಲು ಇನ್ನೂ ಪ್ರಯತ್ನ ಮಾಡಿಲ್ಲ. ಆದರೆ ಅವರ ಪಾಠ ಪ್ರವಚನಗಳು ಕಿವಿಗೆ ಹಾಕಿ ಕೊಳ್ಳುತ್ತಿದ್ದೀನಿ. ಸಾಂಪ್ರದಾಯಕ ಪದ್ದತಿಯಲ್ಲಿ ರಚಿಸುವ ಹಂಬಲ ನಿಮ್ಮ ಪ್ರತ್ಯುತ್ತರದಿಂದ ಇನ್ನೂ ಹೆಚ್ಚಾಗಿದೆ.

   “Anonymous” ಆಗಿ ಪ್ರತಿಕ್ರಿಯೆ ನೀಡಿದ್ದೀರಿ. ನಿಮ್ಮ ಪರಿಚಯವಾದರೆ ನನಗೆ ಸಂತೋಷ …

 4. August 30, 2013 at 10:36 PM

  ಪ್ರತಿಯೊಬ್ಬರ ಪ್ರತಿಕ್ರಿಯೆಗೂ ಸೊಗಸಾದ ಸಮಂಜಸ ಉತ್ತರ ಸಾರ್ ನಿಮ್ಮದು, ಎಷ್ಟೇ ಆದರೂ ಆರ್ಥೊಡಕ್ಸ್ ಕವಿ ಅಲ್ಲವೇ 🙂

 5. August 31, 2013 at 9:09 AM

  ಆ ದೈವತ್ವವೇ ನಿಮ್ಮ ಮನದಾಳದಲ್ಲಿ ನಿರಂತರ ಆಲೋಚನೆಗಳ ಚಿಗುರಿಸಿ, ಅಲ್ಲಿ ಹೊಮ್ಮುವ ತತ್ವದ ಜ್ಞಾನದ ಕಂಪನ್ನು ನಮಗೆಲ್ಲ ಹರಡಿ, ನಮಗೂ ಒಂದು ಹೊಸ ಅನುಭವವನ್ನು ನೀಡುತ್ತಿದೆ. ನಿಮ್ಮ ಸತತ ಕ್ರಿಯಾಶೀಲ ಮನದಾಳದಿಂದ ಸದಾ ಹೊಸ ಹೊಸ ವಿಷಯಗಳು ಹೊಮ್ಮಿ ಬರುತಿರಲಿ.

  • August 31, 2013 at 8:24 PM

   ನಮಸ್ತೆ ಸರ್,

   ನಿಮ್ಮಂತ ಕ್ರಿಯಾಶೀಲ ಚೇತನ ಮನಗಳ ಹಾರೈಕೆಯಿಂದ ಸದ್ವಿಷಯಗಳ ಅರಿವು ನನ್ನಲ್ಲಿ ಉಂಟಾದರೆ ಅದೇ, “ನನ್ನ” ದೈವತ್ವ ಕಾಣುವ ಹಾದಿ ಎಂದು ಕೊಳ್ಳುತ್ತೀನಿ. ನಿಮ್ಮ ಆಶಯಕ್ಕೆ ನನ್ನ ವಂದನೆಗಳು.

 6. September 3, 2013 at 5:07 PM

  ತಾಯಿ ಮತ್ತು ಮಗು ಜಗದ ಸರ್ವತ್ರ ಒಲುಮೆಯ ಸಂಕೇತ. ತುಂಬಾ ಆತ್ಮೀಯವಾದ ಕವನವಿದು.

  • September 3, 2013 at 5:14 PM

   “ಸರ್ವತ್ರ ಒಲುಮೆಯ ಸಂಕೇತ” ಎಂದು ಈ ಭಾವನೆಯನ್ನು ಎತ್ತಿ ಹಿಡಿದಿದ್ದೀರಿ. ನಿಮ್ಮ ಹಿತವಾಕ್ಯ ನನಗೆ ಬಹಳ ಆತ್ಮೀಯವಾಯಿತು.

 7. Ram
  September 5, 2013 at 1:37 PM

  ಅದು ಹೇಗೆ ಅನಾನಿಮಸ್ ಆಯಿತೋ ತಿಳಿಯದು. ನನಗೆ ಛಂದೋಬದ್ಧತೆ ಬಹಳ ಇಷ್ಟ, ಬರೆಯುವುದು ಬಹಳ ಕಷ್ಟ. ಆದ್ದರಿಂದ ನನ್ನ ಪರಿಚಯಸ್ಥ ಕವಿಗಳೆಲ್ಲರಿಗೂ ಛಂದದ ಚಂದದ ಹುಚ್ಚು ಹಿಡಿಸಿ, ಅವರಿಂದ ಬರೆಯಿಸಿ, ಓದುವ ಹುನ್ನಾರ. ನನ್ನ ಬರಹಗಳು ಬುದ್ಧಿಪ್ರಧಾನ, ಕವಿಗಳದು ಹೃದಯಪ್ರಧಾನ. ನಿಮ್ಮಲ್ಲಿ ಎರಡೂ ಮಿಳಿತವಾಗಿದೆ. ಬರೆ, ಇರಿತ, ಇಲ್ಲದಂತೆ ಬರೆಯುವಿರಾದ್ದರಿಂದ ಬರೆಯಿರಿ ಎಂದು ಹಾರೈಸುತ್ತೇನೆ —— ರಾಮ್

  • September 5, 2013 at 2:05 PM

   ನಮಸ್ತೆ ರಾಮನಾಥ್ ಸರ್,
   ಅನಾನಿಮಸ್ ಹಿತೈಷಿ ನೀವೇ ಅಂತ ತಿಳಿದು ಮನಸು ಇನ್ನೂ ಮ್ಯಜ್ಞಾನಿಮುಸ್ ಆಯಿತು. ನಿಜ, ಚಂದೊಬದ್ಧ ಅಮಲೇ ಚೆನ್ನ. ಓದುತ್ತಿದ್ದರೆ ಆಹಾ! ಏನೋ ಒಂದು ಕುಣಿತ ಮನದಲ್ಲಿ. ಖಂಡಿತ ಪ್ರಯತ್ನ ಪಡ್ತೀನಿ ಸರ್. ಆದರೆ ಅದೆಷ್ಟು ಮಟ್ಟಿಗೆ ಓದುಗರಿಗೆ ಆ ಅಲಂಕರಣದ ಪದ್ಯಾಮಲು ಹರಿಸುತ್ತೀನೋ, ನನ್ನಲ್ಲೇ ಇನ್ನೂ ಕ್ವೆಶ್ಚನ್ ಮಾರ್ಕ್ ಇದೆ. ಆ ಮಾರ್ಕಿನ ಬೆಂಡ್ ತೆಗೆದು ಆಶ್ಚರ್ಯ ಚಿನ್ಹೆ ಮಾಡೋದು ಮತ್ತೊಂದು ಪ್ರಶ್ನಾರ್ಥಕವಾಗೆ ಕಾಣ್ತಿದೆ ನನಗೆ 🙂 ನಿಮ್ಮ ಅಭಿಮಾನ ಒಳ್ಳೆಯ ಚಂದೊಬದ್ಧ ಪದ್ಯ ಬರೆಸುವುದೆಂಬ ನಂಬಿಕೆ ನನ್ನ ಮನದಲ್ಲಿ ಮೂಡುತ್ತಿದೆ …

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: