ಬಾನಿನ ಚಂದಿರ …
ಬಾನಿನ ಚಂದಿರ ಕೇವಲ ಒಂದು ವೈಜ್ಞಾನಿಕ ವಸ್ತುವಾಗದೆ, ವಿಸ್ಮಯ ಹುಟ್ಟಿಸುವ ವಿಷಯವಾದಾಗ ಅವನ ಬಗೆ ನಾನಾ ಭಾವನೆಗಳು ಪುಟಿದೇಳುತ್ತವೆ.
ಅಂತಹ ಸಂದರ್ಬದಿ ಮನದಲ್ಲಿ ಮೂಡಿ ಬಂದ ಚಂದ್ರೋಕ್ತಿ:
ನೀನು ತಾನೇ ನನ್ನ ಸ್ವರ್ಣ ವಸಂತ …
ನಲ್ಲನ ಮುತ್ತು …
ವಿಜಯದ ಚೈತ್ರಾಗಮನ …
ನಂಬಿಕೆ …
ಭಾವಾರ್ಥ
ಕಾಣದ ದೈವಕ್ಕೆ ನಮಗೆ ಒಳಿತು ಮಾಡು ಎಂದು ಬೇಡುವುದು ಸಹಜ.
ಕೆಲವೊಮ್ಮೆ ಅದು ಅತಿರೇಕಕ್ಕೂ ಹೋಗಬಹುದು. ತಂದೆ ತಾಯಿ ಹೇಳಿದರೆಂದು ಒಂದು ಪೂಜೆ, ನೆಚ್ಚಿನ ಸ್ನೇಹಿತರು ಅರುಹಿದರೆಂದು ಮತ್ತೊಂದು ನೇಮ ನಿಯಮ, ಇನ್ಯಾರೋ ಹಿತೈಷಿ ಹೇಳಿದರೆಂದು ಅವರ ನೆಚ್ಚಿನ ಜ್ಯೋತಿಷಿಗೆ ಮುಗಿಬಿದ್ದು ಬೇಗ ಕಷ್ಟ ಪರಿಹರಿಸಿ ಎನ್ನುವ ಅರಿಕೆ. ಇದರಲ್ಲಿ ತಪ್ಪು ಸರಿ ಎನ್ನುವ ವಾದವಿಲ್ಲ. ಅವರವರಿಗೆ ತೋಚಿದ ಹಾಗೆ ಮಾಡುವ ಸ್ವಾತಂತ್ರ್ಯ ಎಲ್ಲರಲ್ಲೂ ಇದೆ. ಆದರೆ ಮನುಜ ಪ್ರಯತ್ನವಿರದೆ “ಕಾಯಕ” ದಿಂದ ವಿಮುಖರಾಗಬಾರದೆಂಬುದೇ ಈ ಕೃತಿಯ ಬಿನ್ನಹ ಶುರುವಿನಲ್ಲಿ .
“ಮನಸಿಗೆ ತೃಪ್ತಿ ತಂದುಕೊಳ್ಳದೆ, ಏನೋ ಕಳೆದು ಕೊಂಡವರ ಹಾಗೆ ಸದಾ ಕೊರಗುತ್ತ ಇದ್ದರೆ ಅಥವಾ ಬಹುತೇಕ ವೇಳೆ ಕಣ್ಣು ಮುಚ್ಚಿ ಕೇವಲ ಜಪ ತಪ, ಉಪವಾಸ, ಪೂಜೆ ಮಾಡುತ್ತಾ ಇದ್ದರೆ, ತೇಜೋಮಯವಾದ ದಿನದ ಬೆಳಕನ್ನೇ ನೋಡದೆ ಬರಿ ಭಯ ಹುಟ್ಟಿಸುವ ರಾತ್ರಿ ನೋಡಬೇಕಾಗುತ್ತದೆ ಎನ್ನುವುದು ಎರಡನೇ ಚರಣದ ಸಾರಾಂಶ.
ಸಲಹೆಗಳಿಗೇನು ಬರವಿಲ್ಲವಲ್ಲ ! ನಮಗೆ ಇಂತಹ ಕಷ್ಟ ಎಂದರೆ ಸಾಕು, ” ಹೀಗೆ ಮಾಡಿ, ಹಾಗೆ ಮಾಡಿ, ನಿಮಗೆ ಯಾರೋ ಮಂತ್ರ ಮಾಡಿಸಿದ್ದಾರೆ, ಇತ್ಯಾದಿ ಇತ್ಯಾದಿ … ಹೀಗೆ ಎಲ್ಲ ಬಲ್ಲವರಂತೆ ಮಾತನಾಡುವವರೇ ಜಾಸ್ತಿ”. ಅದು “ಎತ್ತು ಏರಿಗೆ… ಕೋಣ ನೀರಿಗೆ” ಎನ್ನುವಂತೆ ದಾರಿ ತಪ್ಪಿಸುವುದೇ ಜಾಸ್ತಿ ಎನ್ನುವ ಒತ್ತು ಮೂರನೇ ಚರಣದಲ್ಲಿ.
ಅಂಧ ಶ್ರದ್ಧೆ ಬಿಟ್ಟು ನಿಜವಾಗಿ ತಾನು ಮಾಡುವ ಕಾರ್ಯದ ಮೇಲೆ ನಂಬಿಕೆ ಇಟ್ಟಾಗ ಮತ್ತು ತಿಳಿದವರು ಹೇಳಿದಾಗ ನಮ್ರತಯಿಂದ ವಿಮರ್ಶೆ, ಪ್ರಶ್ನೋತ್ತರ ಮಾಡಿ ತಪ್ಪಿದ್ದರೆ ತಿದ್ದುಕೊಂಡು, “ಅಂತರಂಗದಲ್ಲಿ ಹರಿಯನ್ನು ನೆನೆ” ಎನ್ನುವಂತೆ ನಮ್ಮೊಳಗಿರುವ ದಿವ್ಯವಾದ ದೈವ ಶಕ್ತಿಯನ್ನು ಹುಡುಕಿದರೆ ಗೋಚರವಾಗುವುದಿಲ್ಲವೇ ಆ ಪ್ರೇಮ ಮೂರುತಿ ಎನ್ನುವ ಪ್ರಶ್ನೆಯೊಂದಿಗೆ ನಾಲ್ಕನೇ ಚರಣ ಮುಗಿಯುತ್ತದೆ …
ಕಥೆಯೊಂದ ಓದಿದೆ ಅತೃಪ್ತ ಮನದಲಿ …
ಭಾವಾರ್ಥ
ಹುಳಿ ದ್ರಾಕ್ಷಿ ಮತ್ತು ನರಿಯ ಕಥೆ – “ಎಟುಕದ ದ್ರಾಕ್ಷಿಯನ್ನು ನರಿ ಹೇಗೆ ಅದು ಹುಳಿ ಎಂದು ತಿಳಿದು ಪಡೆಯುವ ಪ್ರಯತ್ನವನ್ನು ಬಿಟ್ಟಿತು” ಬಹಳಷ್ಟು ಜನರಿಗೆ ತಿಳಿದಿದೆ.
ಅದರ ಹಿನ್ನಲೆಯಲ್ಲಿ ಬರೆದ ರಚನೆ ಇದು. ತಿಳಿಯಾದ ಮನವಿರದೆ ನಾವು ತೃಪ್ತಿ ಹೊಂದುವುದಿಲ್ಲ ಎನ್ನುವುದು ತಾತ್ಪರ್ಯ.
ಮೊದಲ ಚರಣದಲ್ಲಿ ಮೊಸರ ಮಾಡುವ ದೃಷ್ಟಾಂತ. ಸರಿಯಾಗಿ ಮೊಸರು ಮಾಡಲು ಹೇಗೆ ಕಾದು ಆರಿದ ಹಾಲಿಗೆ ತಕ್ಕಷ್ಟು ಹೆಪ್ಪು, ತೀರ ಉಷ್ಣವು ಅಲ್ಲದ ತೀರ ಶೀತವು ಇರದ ವಾತಾವರಣದ ಅವಶ್ಯಕತೆ ಇದೆಯೋ ಹಾಗೆ ನಮಗೆ ಜೀವನದಲ್ಲಿ ಸಿಗುವ ಸರಿಯಾದ “ಮಾರ್ಗದರ್ಶನ ಮತ್ತು ಪರಿಸರ” ಎಂತಹ ವ್ಯಕ್ತಿಯಾಗಿ ರೂಪಗೊಳ್ಳಬಹುದು ಎನ್ನುವುದಕ್ಕೆ ಸೂಚನೆ. ಯಾವುದೇ ಹೆಚ್ಚು ಕಮ್ಮಿ ಆದರೆ ಒಡಕು ಮೊಸರೆ ಗತಿ …
ಎರಡನೇ ಚರಣದಲ್ಲಿ ಕುದಿಯುವ ಪಾಯಸವನ್ನು ಕುಡಿದು ನಾಲಗೆ ಸುಟ್ಟುಕೊಳ್ಳಬಹುದೇ ವಿನಃ ಸವಿಯನ್ನು ಆನಂದಿಸಲಾಗುವುದಿಲ್ಲ.
ಹಾಗೆ, ಯಾವುದೇ ಗೊಂದಲದಲ್ಲಿ ಸಿಲುಕಿದಾಗ ಅಥವಾ ವಿಶ್ಲೇಷಣೆ ಮಾಡಬೇಕಾದರೆ ಶಾಂತತೆ ಮುಖ್ಯ. ಅದನ್ನು ಹರಿವಾಣದಲ್ಲಿ ಹದವಾಗಿ ಹರಡಿ ಎನ್ನುವುದಕ್ಕೆ ಹೋಲಿಕೆ ಮಾಡಿದ್ದೀನಿ.
ಹೀಗೆ ಸಹನೆ ಮತ್ತು ತಾಳ್ಮೆ ಬದುಕಿನ ಹಾಸು ಹೊಕ್ಕಾದಾಗ, ಯಾವುದೇ ಸಿಗಲಾರದ ಹಣ್ಣು ಸುಮ್ಮನೆ ಹುಳಿಯೆಂದು ಜರಿಯದೆ ಜೀವನ ಸಂತೃಪ್ತಿ ಪಡೆಯಬಹುದು ಎನ್ನುವುದು ಪದ್ಯದ ಸಾರಾಂಶ.
ಜೀವದಲಿ ಜೀವ ಹೊತ್ತು …
ಮಾತೃ ದೇವೋ ಭವ, ತಾಯಿಯೇ ಮೊದಲ ಗುರು ಎನ್ನುವ ನಮ್ಮ ಸಂಸ್ಕೃತಿಯಲ್ಲಿ ಅಮ್ಮನ ಮೇಲಿನ ರಚನೆಗಳು ನಿರಂತರ.
ವಾತ್ಸಲ್ಯಮಯಿಯಾದ ಅಮ್ಮನ ಮೇಲೊಂದು ಕವನ …






